ದಿ ಜಮಖಂಡಿ ಅರ್ಬನ್ ಕೋ-ಆಫ್ ಬ್ಯಾಂಕ ಲಿ., ಜಮಖಂಡಿ ಇದರ ಸನ್ 2020-21 ಸಾಲಿನ ವಾರ್ಷಿಕ ಸರ್ವ-ಸಾಧಾರಣ ಸಭೆಯನ್ನು ರವಿವಾರ ದಿನಾಂಕ 25.09.2021 ರಂದು ಸಾಯಂಕಾಲ 4.00 ಘಂಟೆಗೆ “ಬಸವ ಭವನ” ಬಸ್-ಸ್ಟ್ಯಾಂಡ ರೋಡ ಜಮಖಂಡಿಯಲ್ಲಿ ಕರೆಯಲಾಗಿದೆ. ತಾವುಗಳು ಸಭೆಗೆ ಸಕಾಲಕ್ಕೆ ಬರಬೇಕಾಗಿ ವಿನಂತಿ.
ಸಭೆಯ ಮುಂದಿನ ವಿಷಯಗಳು :-
1.ದಿನಾಂಕ 23.09.2019 ರಂದು ನಡೆದ ಸರ್ವಸಾಧಾರಣ ಸಭೆಯ ಗೊತ್ತುವಳಿಗಳನ್ನು ಓದಿ ದೃಡೀಕರಿಸುವುದು.
2.ಸನ್ 2019-20 ನೇ ಸಾಲಿನ ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಪರಿಶೀಲಿಸುವುದು ಹಾಗೂ ಮುಂದಿನ ವರ್ಷದ ಕಾರ್ಯ ಯೋಜನೆಗೆ ಅನುಮೋದನೆ ನೀಡುವುದು.
3.ಸನ್ 2019-20 ನೇ ಸಾಲಿನ ಲೆಕ್ಕಪರಿಶೋದನೆಯ ವರದಿ ಹಾಗೂ ವರದಿಗೆ ತಯಾರಿಸಿರುವ ಅನುಪಾಲನಾ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.
4.ಸನ್ 2020-21 ನೇ ಸಾಲಿಗಾಗಿ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಲು ಸನ್ನದ್ದು ಲೆಕ್ಕ ಪರಿಶೋಧಕರ ಯಾದಿಯಂತೆ ನೇಮಿಸಿಕೊಳ್ಳುವುದು ಹಾಗೂ ಲೆಕ್ಕ ಪರಿಶೋಧನೆ ಫೀ ನಿಗದಿ ಪಡಿಸುವುದು.
5.ಸನ್ 2019-20 ನೇ ಸಾಲಿನ ಸಾಲಾಸ್ತಿ ಪತ್ರಿಕೆ, ಲಾಭ-ಹಾನಿ ಪತ್ರಿಕೆಗಳಿಗೆ ಮಂಜೂರಿ ನೀಡುವುದು.
6.ನಿರ್ದೇಶಕ ಮಂಡಳಿಯಿಂದ ಸೂಚಿಸಲ್ಪಟ್ಟ ಲಾಭದ ಹಂಚುವಿಕೆಯನ್ನು ಮಂಜೂರು ಮಾಡುವುದು.
7.ಸನ್ 2019-20 ನೇ ವರ್ಷಕ್ಕೆ ಅಂದಾಜಿಸಲಾದ ವೆಚ್ಚಕ್ಕಿಂತ ಪ್ರತ್ಯಕ್ಷ ವೆಚ್ಚ ಹೆಚ್ಚಾಗಿದ್ದು ಅವುಗಳಿಗೆ ಮಂಜೂರಿ ನೀಡುವುದು.
8.ಸನ್ 2020-21 ನೇ ವರ್ಷದ ಸಲುವಾಗಿ ಉತ್ಪನ್ನ ಹಾಗೂ ವೆಚ್ಚದ ಮುಂಗಡ ಪತ್ರವನ್ನು ಮಂಜೂರು ಮಾಡುವುದು.
9.ಬ್ಯಾಂಕಿಗೆ ಸದಸ್ಯರನ್ನು ಸೇರಿಸಿಕೊಂಡ ಮತ್ತು ಸದಸ್ಯತ್ವದಿಂದ ತೆಗೆದು ಹಾಕಿರುವ ಯಾದಿಯ ಬಗ್ಗೆ ಪರಿಶೀಲಿಸುವುದು.
10.ವಸೂಲಾಗದೆಂದು ಪರಿಗಣಿಸಿದ ಕರಡು ಸಾಲಗಳ ಬಗ್ಗೆ ಪರಿಶೀಲಿಸುವುದು.
11.ಬ್ಯಾಂಕಿನ ಸದಸ್ಯರು ಬ್ಯಾಂಕಿನ ಸೇವೆಗಳ ಬಳಕೆಯ ಬಗ್ಗೆ ಪರಿಶೀಲಿಸುವುದು.
12.ಬ್ಯಾಂಕಿನ ಪೋಟ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಪರಿಶೀಲಿಸುವುದು ಹಾಗೂ ಅನುಮೋದಿಸುವುದು.
13.ಬ್ಯಾಂಕಿನ ನಿರ್ದೇಕರು ಮತ್ತು ಸಂಬಂಧಿಕರು ಪಡೆದಿರುವ ಸಾಲಗಳ ಪರಿಶೀಲನೆ ಮತ್ತು ಸುಸ್ತಿಯಾಗಿದ್ದಲ್ಲಿ ವಸೂಲಾತಿಗೆ ಕೈಗೊಂಡಿರುವ ಕ್ರಮ ಬಗ್ಗೆ ಪರಿಶೀಲನೆ.
14.ಮೆ|| ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬರತಕ್ಕ ಇನ್ನಿತರ ವಿಷಯಗಳು.
ಸದಸ್ಯನು ಬಳಸಿಕೊಳ್ಳಬೇಕಾದ ಕನಿಷ್ಥ ಸೇವೆಗಳು ಅಥವಾ ಸೌಲಭ್ಯಗಳು :
(1) ಬ್ಯಾಂಕು ಒದಗಿಸುವಂತೆ ಪ್ರತಿ ಸದಸ್ಯನು ಬಳಸಿಕೊಳ್ಳಬೇಕಾದ ಕನಿಷ್ಥ ಸೇವೆಗಳ ಅಥವಾ ಸೌಲಭ್ಯಗಳ ಪ್ರಮಾಣವು ಕೆಳಗಿನಂತಿರತಕ್ಕದ್ದು-
(ಎ) ಸದಸ್ಯನು ಹೊಂದಿರತಕ್ಕ ಕನಿಷ್ಥ ಶೇರು ಬಂಡವಾಳವು ಐದು ನೂರು ರೂಪಾಯಿಗಳು.
(ಬಿ) ಸದಸ್ಯನು ಹೊಂದಿರಟಕ್ಕ ಕನಿಷ್ಥ ಠೇವಣಿಯು ಎರಡು ಸಾವಿರದ ಐದು ನೂರು ರೂಪಾಯಿಗಳು, ಅಥವಾ ಸದಸ್ಯನು ಸಾಲ ಪಡೆಯಲು ಅಗತ್ಯವಿದ್ದಲ್ಲಿ, ಬ್ಯಾಂಕು ನಿರ್ದರಿಸಿದ ಮಿತಿಗೆ ಒಳಪಟ್ಟು ಸದಸ್ಯನ ಕೋರಿಕೆಯ ಮೊತ್ತ.
(ಸಿ) ಸದಸ್ಯನು ತನ್ನ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ ವರ್ಷದಲ್ಲಿ ನಡೆಸಬೇಕಾದ ಕನಿಷ್ಥ ಬ್ಯಾಂಕಿಂಗ್ ವ್ಯವಹಾರಗಳ ಸಂಖ್ಯೆಯು ಆರು ಇರತಕ್ಕದ್ದು.
(2) ಮೇಲೆ ತಿಳಿಸಿದ ಠೇವಣಿಯು ಸದಸ್ಯನು ವರ್ಷವಿಡೀ ಬ್ಯಾಂಕಿನಲ್ಲಿ ತೊಡಗಿಸಿದ ಎಲ್ಲಾ ತರಹದ ಠೇವಣಿ (ತಗಾದೆ ಮತ್ತು ಅವಧಿ) ಗಳನ್ನು ಒಳಗೊಂಡ ಒಟ್ಟು ಮೊತ್ತ ಆಗಿರತಕ್ಕದ್ದು.
(3) ರಿಜರ್ವ್ ಬ್ಯಾಂಕು ನೀಡಿರುವ ‘ನಿಮ್ಮ ಗ್ರಾಹಕನನ್ನು ತಿಳಿಯಿರಿ (ಕೆ.ವೈ.ಸಿ)’ ನಿರ್ದೇಶನವನ್ನು ಬ್ಯಾಂಕಿನ ಪ್ರತಿ ಸದಸ್ಯನಿಗೆ ಅನ್ವಯಿಸತಕ್ಕದ್ದು
(4) ಸಾಲದ ಮೊತ್ತವು ಬ್ಯಾಂಕು ಮಂಜೂರು ಮಾಡಿ ಸದಸ್ಯನು ಉಪಯೋಗಿಸಿಕೊಂಡ ಸಾಲದ ಮಿತಿಯಾಗಿರತಕ್ಕದ್ದು. ಇದು ಇಡೀ ಸಾಲದ ಅವಧಿಗೆ ಅನ್ವಯವಾಗತಕ್ಕದ್ದು.